ಹೆಣ್ಣು ಪ್ರೇಮದಿಂದ ವಧುವಾದವಳು
ರಚನೆ : ಜಟ್ಟಿಂಗರಾಯ ಹತ್ತಿ (ಜಗ)
----------------------------------
ನನ್ನ ಚಂದ್ರಮುಖಿ - ತ್ಯಾಗ, ಸಹನೆ, ಪ್ರೀತಿ, ಸಹಾನುಭೂತಿಯ ಪ್ರತೀವ್ರತೆಯ ಪ್ರತಿರೂಪದ ಸಹಧರ್ಮಿಣಿ ಅವಳು. ನನ್ನ ಭವಿಷ್ಯ ಪ್ರಪಂಚದ ಕಡೆಗೆ ಅಂಬಕವು ತಿರುಚಲಾರಂಭಿಸದವು, ನಯನವು ಕಾಯದಲ್ಲಿ ನಿರತವಾಗಿದ್ದವು. ಕಿರುಮಿಂಚಿನ ಹತಾಶೆಯ ಯೋಜನೆ ಶೀರ ಮಾಡತೊಡಗಿತು, ಅಷ್ಟರಲ್ಲಿ ತಿರುಚುವ ಕಣ್ಣುಗಳು ಪ್ರೀತಿಯ ಪ್ರತಿರೂಪದ ಪೂರ್ವಸಿ ಗೋಚರಿಸಿದಂತೆ ಭಾಸವಾಯಿತು. ಆ ಭಾಸವು ಕಾದಲ್ಮೆಯ ರೂಪ ತಾಳಲು ನನ್ನ ಅರಸತಿ ಹಾತೊರೆಯುತ್ತಿದ್ದವಳು, ನನ್ನ ಭರವಸೆಯ ಅರ್ಧಾಂಗಿಯು ನಿಜರೂಪದ ಬಹುದೊಡ್ಡ ಉಡುಗೊರೆಯಾಗಿ ಇದ್ದವಳು ಅವಳೆ..... ನನ್ನ ತಂದೆಯ ಹೆಂಡತಿಯ ಹಿರಿ ಸೊಸೆಯವಳು
----------------------------------
ನೋಂದಣಿ ಐಡಿ : KPF-S1-5530