Submission 615

ಸಾಗರ

ರಚನೆ : ಗಾಯತ್ರಿ ಡಿಎ

----------------------------------

ಸಮುದ್ರದಲೆ ಏನೋ ಗುಟ್ಟೊಪ್ಪಿಸಿ ಓಡಿತು ಏನೆಂದು ನಾ ಕೇಳೆ ಮತ್ತೊಮ್ಮೆ ಧಾವಿಸಿ ಕಾಲ ಮುತ್ತಿಟ್ಟು ಮರಳ ಜಾರಿಸಿ ನಾಚಿ ನೋರೆಯಾಯ್ತು ಅದರ ಗುಟ್ಟಿನ ಆಳ ಅರಿಯ ಬಲ್ಲೆನೆ ನಾನು ಅಳೆಯ ಬಲ್ಲೆನೆ ನಾನು ಮುತ್ತುಂಟು, ಮೀನುಂಟು ಜೀವರಾಶಿಯ ಬಹು ದೊಡ್ಡ ನಂಟು ನೋಡಿದಷ್ಟು ಹಿತ, ಕಣ್ಮಮನಕಾನ೦ದ ಇಂಗದ ಮೋಡಿ, ಬಾಚಿ ಹಿಡಿಯುವ ಆಸೆ ಬಿಡದಂತೆ ಮರುಳುವ ಚೈತನ್ಯದಲೆಯ ಹಗಲೆಲ್ಲ ದುಡಿದು ಕೆಂಪಾದ ಸೂರ್ಯ ಸಾಗರದಿ ಮೊಗ ತೊಳೆಯೆ ಅವನ ಕೆಂಪೆಲ್ಲ ಕಡಲೊಳಗೆ ಬೆರೆತು ರಂಗಾಯಿತು ಸೂರ್ಯನ ಮನ ತಾ ಕೆಂಪಾಗೆ ಕಾರಣವ ಹುಡುಕಿತು ಸಂಜೆ,ಸಾಗರ ಬಾಂದಳವ ಮುತ್ತನಿಡೆ ಅದ ಕಂಡು ನಾಚಿ ರವಿ ತಾ ಕೆಂಪಾದನೆ? ಇಲ್ಲ ಶಶಿಯ ಬರುವ ನೋಡೆ ಶರಧಿ ಆತುರದಿ ಕುಣಿಕುಣಿದು ನಲಿದು ಬೋರ್ಗರೆಯೆ ಅದನರಿತು ರಂಗಾದನೆ? ಕಾರಣವು ಏನಿರಲಿ ಇದ ಕಂಡ ಮನ ಸಂತೃಪ್ತಿಯಲಿ ಅರಳಿ ತನ್ನೊಳಗೆ ತಾ ಮರಳಿ ಖುಷಿಯಲ್ಲಿ ಮೈ ಮರೆಯಿತು ...

----------------------------------

ನೋಂದಣಿ ಐಡಿ : KPF-S1-5214

0
Votes
174
Views
1 Year
Since posted

Finished since 404 days, 17 hours and 17 minutes.

Scroll to Top