Submission 976

ರಂಜಾನ್ ಕನ್ಯೆ

ರಚನೆ : ಶ್ರೇಯಸ್ ಹೆಚ್ ಸಿ

----------------------------------

ಕಾಸಗಲದ ಕಣ್ಣಿನವಳು ಕಾಡಿಗೆಯನು ಹಚ್ಚಿರುವಳು, ಕುಡಿನೋಟದಿ ನುಂಗುವವಳು ಇವಳ ಹೆಸರು ಸೋಬಾನೆಪದ. ಯವನರ ಮನೆತನದವಳು ಯೌವ್ವನದಿ ತುಳುಕುವವಳು, ನುಡಿದರೆ ಮುತ್ತುದುರುವವಳು ಇವಳ ಗುಣವು ವಚನಪದ. ಚೋಟುದ್ದ ನಿಂತವಳು ಚಂದಿರನ ಮೊಗದವಳು, ತಾರೆಯಂತೆ ಹೊಳೆಯುವಳು ಇವಳ ರೂಪ ಜಾನಪದ. ತುಂಬಿದೆದೆಯ ಮೈಯ್ಯವಳು ಮುಂಗುರುಳಲೆ ಸೆಳೆಯುವವಳು, ತುಟಿಯಂಚಲಿ ನಗುವವಳು ಇವಳ ಮಾತು ದಾಸಪದ. ನನ್ನ ಹೃದಯವ ಕದ್ದವಳು ಕನಸಲ್ಲೂ ಕಾಡುವಳು, ಮಗುವಿನ ಮನಸುಳ್ಳವಳು ಇವಳ ಬದುಕು ತತ್ವಪದ. ಸಲೀಮನ ಅನಾರ್ಕಲಿಯು ಷಹಜಾನನ ಮುಮ್ತಾಜಳು, ಎಲ್ಲರಿಗೂ ಮೇಲಿನವಳು ಇವಳ ಕಥೆಯು ಗೀಗೀಪದ.

----------------------------------

ನೋಂದಣಿ ಐಡಿ : KPF-S1-5463

0
Votes
157
Views
1 Year
Since posted

Finished since 348 days, 22 hours and 58 minutes.

Scroll to Top