ಅನ್ನದಾತ ರೈತ
ರಚನೆ : ಚಿದಾನಂದ ಕೆ. ಎನ್.
----------------------------------
ಬೀಜವ ಬಿತ್ತುವ ರೈತನ ನೋಡು ಅನ್ನವ ಬೆಳೆಯಲು ಹೊರಟಿಹನು ಚಳಿಮಳೆಯೆನ್ನದೆ ಬಿರು ಬಿಸಿಲಲ್ಲಿ ದುಡಿಮೆಯ ಕಾಯಕ ಮಾಡಿಹನು || ಲೋಕದ ಜನರ ಹಸಿವೆ ನೀಗಿಸೆ ಹಗಲಿರುಳೆನ್ನದೆ ದುಡಿದಿಹನು ಬಡವ ಬಲ್ಲಿದ ಬೇಧವನೆಣಿಸದೆ ನಿಸ್ವಾರ್ಥ ಸೇವೆಯ ಮಾಡಿಹನು || ಧರೆಯೊಳಗೊಬ್ಬನೆ ರೈತ ಮಹಾತ್ಮ ದೈವ ಸ್ವರೂಪಿ ಈ ಜೀವಾತ್ಮ ದೇವರ ಹುಡುಕುವ ಮನುಜರೆ ಕೇಳಿ ಅನ್ನದಾತನೇ ನಿಜ ಪರಮಾತ್ಮ || ರೈತನೆ ದೇಶದ ಬಂಧು ಬಾಂಧವ ಎನ್ನುವ ಸತ್ಯವ ಸಾರೋಣ ||
----------------------------------
ನೋಂದಣಿ ಐಡಿ : KPF-S1-5506