ಒಲುಮೆಯ ಚೆಲುವೆ
ರಚನೆ : ಶಿಶಿರ ರಮೇಶ ಪಾಟೀಲ
----------------------------------
ನನ್ನ ಒಲುಮೆಯ ಚೆಲುವೆ ಬಾಳಿಗೆ ಹೊಸ ಬೆಳಕು ನೀನಾದೆ ನನ್ನ ಬಾಳಿಗೆ ತಳಕು ನೂರಾರು ಭಾವನೆಗಳ ತುಸು ಮೆಲಕು ಪ್ರೀತಿಯ ಮಾತುಗಳು ಹೃದಯವ ಕಲಕು ||೧|| ಹೂವಿನ ಹಾಸಿಗೆಯು ನೀನು ಜೊತೆ ಇರಲು ನನ್ನ ಪ್ರೀತಿಯ ಹೃದಯಕ್ಕೆ ನಿನ್ನದೇ ಕಾವಲು ನೀನು ಕೈ ಹಿಡಿದರೆ ನನಗೆ ಎಲ್ಲಿಯ ಸೋಲು ಸಂಸಾರ ಹಾಲು-ಜೇನು ತುಂಬಿದ ಬಟ್ಟಲು ||೨|| ನೀನು ಕೈ ಹಿಡಿದರೆ ಮೈಯೆಲ್ಲಾ ಎಲೆಕ್ಟ್ರಿಫಿಕೇಶನ ಮುಖದ ಮೇಲಿನ ಮುಗುಳುನಗೆಯೇ ಜಸ್ಟ್ಫಿಕೇಷನ ನಾನು ಮಾಡಿದ ತಪ್ಪುಗಳಿಗೆ ನಿನ್ನದು ಕರೆಕ್ಷನ ನನ್ನ ಬಾಳಿಗೆ ನೀನೆ ಅಟ್ರಾಕ್ಷನ್ ||೩|| ನನ್ನ ಬಾಳಿಗೆ ನೀನೆ ಸಂಗೀತ ಸಪ್ತ ಸ್ವರಗಳ ಹಾಡಿದ ಮಾಂತ್ರಿಕ ನಗುನಗುತ್ತ ಜೀವನದ ಕಾರ್ಮಿಕ ನಿನ್ನ ನಗು ಮುಖವೇ ಎಲ್ಲೆಲ್ಲೂ ಸರ್ವ ವ್ಯಾಪಕ ||೪||
----------------------------------
ನೋಂದಣಿ ಐಡಿ : KPF-S1-5015