ಕಲುಷಿತವಾಯಿತು ಬದುಕು..
ರಚನೆ : ಅಂಜಿನಿ ಕುಮಾರ್ ಎಂ
----------------------------------
ಎತ್ತ ನೋಡಿದರತ್ತ ಧೂಳು ಹೊಗೆಯದೆ ಗತ್ತು, ಭೂಮಿ ತಾಯಿಯ ಎದೆಯ ಸೀಳಿ ಬಿಟ್ಟರು ಹೊಲಸು, ಹರಿವ ನದಿಯಲು - ನಿಂತ ಕೆರೆಯಲು, ಎಲ್ಲ ಕಲುಷಿತ ಬದುಕು ವಿಷಪೂರಿತ, ಖಾರವಾಯಿತು ಮನಸು ಕಾರ್ಖಾನೆಗಳ ಕುರಿತು|| ಅನ್ನ ನೀಡುವ ಕೈಗೆ ಸಂಕೋಲೆಯು ಬಿತ್ತು, ಹೊಲಗದ್ದೆ ತೋಟಗಳ ಮೇಲೆ ಧನಿಕರ ಕಣ್ಬಿದ್ದು, ನಗರ ಸೇರುವಂತಾಯ್ತು ಹೆತ್ತಮ್ಮಳ ಬಿಟ್ಟು, ಮೇಘರಾಜನ ನಂಬಿ ಬೆವರು ಹರಿಸಿದ ಜೀವ ಜೀತದಾಳಾಯ್ತು ತಲೆಬಾಗಿ ನಿಂತು, ಖಾರವಾಯಿತು ಮನಸು ಕಾರ್ಖಾನೆಗಳ ಕುರಿತು|| ಅನ್ಯಗ್ರಹಗಳ ಸೇರೋ ಮೂರ್ಖ ಮಾನವನ ಆಸೆ, ಇರುವ ಧರೆಗೆ ವಿಷವನುಣಿಸಿದ ದುರ್ದೆಸೆ, ಗಗನಕ್ಕೆ ಹಾರುವ ದೊರೆಗೆ ನೆಲಕಾಣದಾಯ್ತು, ಬಡಜನರ ಬದುಕು ಬೀದಿನಾಟಕವಾಯ್ತು, ತುತ್ತು ಸಿಗದ ಹೊತ್ತು ತಿನ್ನುವರೇ ಧನ-ಕನಕವ ಬಿತ್ತು, ದುಃಖವಾಯಿತು ಮನಸು ಧರೆಗೆ ದೊಡ್ಡವರ ಕುರಿತು||
----------------------------------
ನೋಂದಣಿ ಐಡಿ : KPF-S1-5028