Submission 453

ನಟನೆ

ರಚನೆ : ಶ್ರಾವಣಿ ಹನುಮಪ್ಪ

----------------------------------

ನಟಿಸಬೇಕು ಗೆಳೆಯ ಬದುಕಲು ನಟಿಸಬೇಕು ಗೆಳೆಯ ನಟಿಸುತಾನೆ ಬಾಳ ಪಯಣ ಸವೆಸಬೇಕು ಗಳೆಯ ನಟಿಸಬೇಕು ನಟರನು ಮೀರಿ ಬದುಕಬೇಕು ಬಡತನ ಮೀರಿ ಸತ್ಯ-ಮಿತ್ಯಗಳೆರಡನು ದೂರಿ ನಡೆಯಬೇಕು ಮುಳ್ಳಿನ ದಾರಿ ನಿನ್ನೊಳಿರುವ ಮೋಸದ ಮಾರಿ ಹಾಕದಿರದು ಬೆನ್ನಿಗೆ ಚೂರಿ ರಕುತವೆಲ್ಲ ಭೂಮಿಗೆ ಜಾರಿ ಮೆರೆಯುತಿರಲು ಕ್ರೌರ್ಯದ ಭೇರಿ ಉಸಿರು ಹಸಿರು ಮನೆಯ ಸೇರಿ ಜೀವ ದೈವ ಲೋಕಕೆ ಹಾರಿ ಸ್ವರ್ಗ ನರಕ ತಿಳಿಯದ ದಾರಿ ಗೆದ್ದುದ್ದೇನು ಕಪಟವ ತೋರಿ ಕಪಟ ನಟನೆ ಕಟ್ಟಿತು ಗೋರಿ ಅತ್ತರೇನು ಮಸಣವ ಸೇರಿ ನಟಿಸು ಅಲ್ಲೂ ನಗುವನು ತೋರಿ ಅದುವೆ ತಾನೇ ನೀ ಆಯ್ದ ಕೇರಿ..

----------------------------------

ನೋಂದಣಿ ಐಡಿ : KPF-S1-5030

0
Votes
178
Views
1 Year
Since posted

Finished since 404 days, 16 hours and 9 minutes.

Scroll to Top