Submission 537

ನರನ ಬಾಳಿನ ಜ್ಯೋತಿ ನಾರಿ

ರಚನೆ : ಲಕ್ಷ್ಮೀದೇವಿ ಪತ್ತಾರ

----------------------------------

ಶ್ರೀರಾಮನ ಧರ್ಮದ ದಾಳವಾದವಳು ಸೀತೆ ಪಾಂಡವರ ಒಗ್ಗಟ್ಟಿಗೆ ಉರುವಲಾವದಳು ಕೃಷ್ಣೆ ಪ್ರತಿಕಾರದ ಜ್ವಾಲೆಯಲ್ಲಿ ಭಸ್ಮವಾದವಳು ಗಾಂಧಾರಿ ಅದು ಅಂದಿನ ಕಾಲದ ಮಾತಾಯ್ತು ಈ ಕಲಿಯುಗದ ಕಾಲದಲ್ಲೂ ಬುದ್ಧನ ಪರಿತ್ಯಾಗದ ಹೋಮ ಕುಂಡದ ಹವ್ವಿಸ್ಸಾದವಳು ಯಶೋಧರೆ ಗಾಂಧೀಜಿಯ ಸತ್ಯ ಶೋಧನೆಯ ಹೋರಾಟದ ಚರಕದಲಿ ನೂಲಾದಳು ಕಸ್ತೂರಿ ಬಾಯಿ ಹೀಗೆಯೇ ಕಾಲ ಯಾವುದೇ ಇರಲಿ ಯಾವುದೇ ಪುರುಷನಾಗಿರಲಿ ಸಾಮಾನ್ಯನೂ, ಅಸಾಮಾನ್ಯನೂ ತನ್ನ ಭಾವದೀಪ್ತಿ ಬತ್ತಿದರೂ ಚಿಂತೆಯಿಲ್ಲ ತ್ಯಾಗ ಸೇವೆಗೆ ಮಹಿಳೆದೆ ಮೇಲುಗೈ

----------------------------------

ನೋಂದಣಿ ಐಡಿ : KPF-S1-5121

0
Votes
182
Views
1 Year
Since posted

Finished since 404 days, 17 hours and 10 minutes.

Scroll to Top