Submission 595

ನೀ ಬಿಟ್ಟು ಹೋದ ಸಾಲುಗಳು

ರಚನೆ : ದಿವ್ಯಾ ದೇವೇಂದ್ರ

----------------------------------

ಪ್ರೀತಿ ಮಾಯೆಯ ಕಡಲು ಬಹುದೂರಕೆ ಸಾಗುತಿದೆ ನಲ್ಮೆಯ ದೋಣಿ, ಯಾರಿಗೂ ಕಾಣದ ತೀರ, ಆರ್ಭಟಿಸದೆ ಇರುವ ಮೌನದ ಅಲೆಗಳು , ನೋಡಿದರೂ ಕಾಣದ ಮನಸಿನ ನೋವಿನ ಆಳ, ಮತ್ತೆ ಕೂಗಿ ಕೂಗಿ ಕರೆಯುತ್ತಿದೆ ನಿನ್ನ ಹೆಸರನು.. ಕನಸಿನಲ್ಲಿಯೂ ಬಂದು ನನ್ನನ್ನು ಅಪಹರಿಸಿ ನಿನ್ನ ತೋಳುಗಳಲ್ಲಿ ತಬ್ಬಿ ಹಿಡಿಯುವೆ, ಬೆಳಕಿನ ಸ್ವರೂಪಿಯಾದ ಆ ನಿನ್ನ ಕಣ್ಣುಗಳು ನಲ್ಮನೆಯ ಕಿರು ನೋಟದ ಮುಗುಳುನಗೆ ಎದೆ ಬಡಿತದ ಕದವ ತೆಗೆದು ಬಾರಿಸುತ್ತಿದೆ ಜೋರಾಗಿ.. ಮಾತು ಮೌನವಾಗಿದೆ ಆವರಿಸಿದೆ ಮೋಡಗಳು ನಿನ್ನನ್ನೇ ದಿಟ್ಟಿಸಿ ನೋಡುವ ಆಸೆಯಾಗಿದೆ, ನಾ ಬರುವೆ ಹಿಂಬಾಲಿಸಿ, ನಾ ಬರುವೆ ಹಿಂಬಾಲಿಸಿ, ನೋಡಬಾರದೆ ನೀ ತಿರುಗಿ..

----------------------------------

ನೋಂದಣಿ ಐಡಿ : KPF-S1-5178

0
Votes
140
Views
1 Year
Since posted

Finished since 346 days, 13 hours and 19 minutes.

Scroll to Top