Submission 613

ಮಣ್ಣಿಗೊಂದು ಕವಿತೆ

ರಚನೆ : ಸಿಮೂರ ಮರಿದಾಸನಹಳ್ಳಿ

----------------------------------

ಕಳೆಯ ಸೆರಗು ಜಾರಿಸಿ ಭೂರಮೆಯ ಚುಂಬಿಸಿ ನೇಗಿಲ ಮೊನೆಯಲಿ;ಮಣ್ಣಿಗೊಂದು ಕವಿತೆ ಮಳೆಯ ಹಾಡು ಬಿಸಿಲ ನರ್ತನ ನಗುತ ಬೀಜವು ಕಣ್ ಬಿಡುವುದಕೆ;ರೈತನಾಗಿ ಕುಳಿತೆ ಕಡಲ ಎದೆಯಲಿ ಸಿಹಿನೀರ ಮೊರೆತ ಒಳಗಿಳಿದು ಹೀರುವ ಅರುಣ;ಮನ್ಮಥ ಚದುರಿದ ಗಾಳಿಮುಗಿಲುಗಳ ವಿರಹ ಏರಿದಷ್ಟು ತಣಿಸಿ ಹನಿಸುವುದೆ ಪ್ರೇಮ;ಪ್ರಾಯಶಃ ವೀಣೆಯ ತಂತಿಯಲಿ ತೊಳಲಾಟದ ತರಂಗ ಅರಳಿ ಕುಳಿತು ಏದುಸಿರು ಬಿಡುತಿದೆ;ಶೃತಿಮೀರಿ ಮೃದಂಗ ಬೆರಳುಗಳು ಬಳಸಲು ವೀಣೆಯಲಿ ನಾದ ಬಿಸಿ ಕೈಗಳ ಮೇಲ್ಜಿಗಿತಕೆ;ಮೃದಂಗದಲಿ ಉನ್ಮಾದ ಲೇಖನಿಗೂ ಹಾಳೆಗಳಿಗೂ ಪ್ರೇಮ ಪ್ರಾಯಾಸ ಹುಟ್ಟಿದ ಎಲ್ಲಾ ಕವಿತೆಗಳಿಗೆ ಹೆಸರಿಡುವುದು ಸಾಹಸ

----------------------------------

ನೋಂದಣಿ ಐಡಿ : KPF-S1-5212

0
Votes
104
Views
11 Months
Since posted

Finished since 296 days, 11 hours and 59 minutes.

Scroll to Top