Submission 619

ಅಮ್ಮನ ಬಗ್ಗೆ

ರಚನೆ : ಅಶ್ವಿನಿ ಹಿರೇಮಠ

----------------------------------

ಗರ್ಭದಲ್ಲಿ ಕಂಡ ಆ ಪುಟ್ಟ ಕಂದ ಜೀವದ ಬೆಳವಣಿಗೆ ಬಂದಿತ್ತು ಅವಳ ಕಣ್ಣಂಚಿನಿಂದ ಭಾಷ್ಪದ ಮೆರವಣಿಗೆ. ಅಳುತ್ತ ಹುಟ್ಟಿದೆ ನಾನಾಗಿ ಅವಳ ಮಗು ಕಂಡಿತ್ತು ಅವಳ ಮುಖದಲ್ಲಿ ಒಂದು ನಗು... ನಾನು ಅತ್ತಾಗ ನಗುತ್ತಿದ್ದ ಜೀವ ಕಂಡು ಅಂದು ಬೆರಗಾಗಿತ್ತು, ಇಂದು ಅವಳ ಮಮತೆ ಕಂಡು ನನಗೆ ಬೆರಗು ಮೂಡಿಸಿತ್ತು.... ಸಾಕಿದಳು ನನ್ನನು ಪುಟ್ಟ ಕಂದ ನಂತೆ ನನ್ನ ಕಷ್ಟ ನೋವುಗಳು ಮರಿಯುವಂತೆ. ಪುಣ್ಯ ಮಾಡಿದ್ದೆ ನಾ ಅವಳಿಂದ ಈ ಜನ್ಮ, ಬಯಸುವೇನು ಮತ್ತೆ ಪಡೆಯಲು ‌ ಪುನರ್ಜನ್ಮ.. ಇದಕ್ಕಿಂತ ಹೆಚ್ಚೇನು ಬೇಕು ಈ ಜೀವಕ್ಕೆ, ಶರಣಾಗುವೆನು ನನ್ನ ಜೀವನ ಆ ಜೀವಕ್ಕೆ...

----------------------------------

ನೋಂದಣಿ ಐಡಿ : KPF-S1-5219

0
Votes
183
Views
1 Year
Since posted

Finished since 404 days, 17 hours and 13 minutes.

Scroll to Top