ವಿದ್ಯಾರ್ಥಿಯ ನೋವಿನ ಸಂದೇಶ ನನ್ನವರ ಎದೆ ಒಡೆದಾವು
ರಚನೆ : ದಿನೇಶ್ ಆಚಾರಿ
----------------------------------
ಮನೆಗೆ ಹೋಗಿ ಒಮ್ಮೆಲೆ ಹೇಳಬೇಡ ಗೆಳೆಯ, ನಾನು ನಪಾಸಾದ ವಿಷಯ ನನ್ನವರ ಎದೆ ಹೊಡೆದಾವು || ನನ್ನಪ್ಪ ಬಂದು ನನ್ನ ಮಗ ರ‍್ಯಾಂಕ್ ಬಂದಿದ್ದಾನೆ ಎಂದು ಕೇಳಿದರೆ| ಒಮ್ಮೆಲೇ ಹೇಳಬೇಡ ಗೆಳೆಯ ನಾನು ಅಬ್ಸಲ್ಯೂಟ್ ಮಿನಿಮಂ ಎಂದು|| ನನ್ನವ್ವ ಬಂದು ನನ್ನ ಮಗ ಎಷ್ಟು ಅಂಕ ಗಳಿಸಿದ್ದಾನೆ ಎಂದು ಕೇಳಿದರೆ| ಒಮ್ಮೆಲೇ ಹೇಳಬೇಡಿ ಗೆಳೆಯ ೩೦% ಗಿಂತಲೂ ಕಡಿಮೆ ಎಂದು॥ ನನ್ನ ತಂಗಿ ಬಂದು ನನ್ನ ಅಣ್ಣ ಎಷ್ಟು ವಿಷಯದಲ್ಲಿ ಪೂರ್ತಿ ಅಂಕ ಗಳಿಸಿದಾನೆ ಎಂದು ಕೇಳಿದರೆ| ಒಮ್ಮೆಲೇ ಹೇಳಬೇಡಿ ಗೆಳೆಯ ನಾಲ್ಕು ವಿಷಯದಲ್ಲಿ ಶೂನ್ಯ ಸಂಪಾದನೆ ಎಂದು॥ ನನ್ನಣ್ಣ ಬಂದು ನನ್ನ ತಮ್ಮ ಉತ್ತೀರ್ಣನಾಗಿದ್ದಾನೆಯೇ ಎಂದು ಕೇಳಿದರೆ| ಒಮ್ಮೆಲೆ ಹೇಳಬೇಡ ಗೆಳೆಯ ನಾಲ್ಕು ವಿಷಯದ ಅಂಕ ಸೇರಿಸಿದರು ಒಂದು ವಿಷಯ ಪಾಸಾಗುವುದಿಲ್ಲ ಎಂದ॥. ಮನೆಗೆ ಹೋಗಿ ಒಮ್ಮೆಲೇ ಹೇಳಬೇಡ ಗೆಳೆಯ ನನ್ನವರ ಎದೆ ಒಡೆದಾವು॥
----------------------------------
ನೋಂದಣಿ ಐಡಿ : KPF-S1-5231