Submission 643

ದೇವತೆ

ರಚನೆ : ಕಿರಣ

----------------------------------

ಮೊದಲ ನೋಟದಲ್ಲೇ ಗೆದ್ದವಳು ನೀನು ನಿನ್ನ ಆ ಶಾಂತತೆಗೆ ಶರಣಾದೆ ನಾನೂ ಸೋಲನ್ನೇ ಬಯಸದ ನನಗೆ ಸೋಲಿನಲ್ಲು ಗೆಲುವು ತೋರಿಸಿದವಳು ನೀನು ನಿನ್ನ ಸ್ವಾಭಿಮಾನಕ್ಕೆ ಸೋತು ನೀರಾದವನು ನಾನು ಎಲ್ಲರಂತೆ ನೀನಲ್ಲ ಎಂದು ಪ್ರತೀ ಸಗರ್ಷದಲ್ಲಿ ಸ್ಪಷ್ಟನೆ ಕೊಟ್ಟವಳು ನೀನು ಈ ನಮ್ಮ ಸ್ನೇಹವನ್ನು ಎಸ್ಟೆ ಅಡ್ಡಿಬಂದರು ಕುಗ್ಗದೆ ಹೆಗಲುಕೊಟ್ಟು ಹೊತ್ತವಳು ನೀನು ನನ್ನ ತಾಯಿಯ ಹೊರತು ಇನ್ನೊಂದು ಹೆಣ್ಣಿಗೆ ಕ್ಷಮೆಯಾಚಿಸಿದವನಲ್ಲ ನಾನು ನನ್ನನ್ನೇ ಬದಲಾಯಿಸಿದವಳು ನೀನು ಈ ಕಲ್ಲನು ಕರಗಿಸಿ ಮರು ಕೆತ್ತಿದವಳು ನೀನು ಈ ಬದಲಾವಣೆಗೆ ಮೊದಲ ಕಾರಣ ನೀನೂ ...

----------------------------------

ನೋಂದಣಿ ಐಡಿ : KPF-S1-5247

0
Votes
103
Views
11 Months
Since posted

Finished since 296 days, 11 hours and 59 minutes.

Scroll to Top