Submission 653

ಹರಕು ಆಚರಣೆ

ರಚನೆ : ಸುಮಂತ್ ಕೊಹಿಮಾ

----------------------------------

ಕಂಪಿದ್ದ ಜಾಗ ಕೊಳೆ ಕೊಂಪೆ ಕಟ್ಟಿದರೆ! 100 ವರ್ಷಗಳ ಯಥಾವತ್ ಇಳಿಮುಖ, ಕುಗ್ಗಿ ಕ್ಷೀಣಿಸಿದ ಜಾಗ(ದ), ಕಂಪನು ಆಚರಿಸುವರೆ? ಬುಡ ಬತ್ತು ಬಿದ್ದ ಹೆಮ್ಮರ, ಅಮ್ಮ! ಎಡೆ,‌ನೀರ್ಗಾಯಿ, ಸರ್ಪಗಲ್ಲು, ಅರಿಶಿಣದಾರ, ಗದ್ದುಗೆ ಮುರಿದು ಬಿದ್ದ ಇಂದು, ಆ ಹೆಮ್ಮರವ! ಆಚರಿಸುವರೆ? ಗಡಿದಾಟಿ ಅಡಿಗಡಿಗೆ ಊರಾಚೆ ಕೆರೆ‌ ಕೋಡಿ ಅಂಚಿಗೆ, ಗೊಂಬೆ ಕುಂಕುಮ, ಅರಶಿಣ‌, ಅಪಶಕುನ ಆಪತ್ತು. ಅದೆ ಅಮ್ಮನ, ಗಡಿ ಮಾರಮ್ಮನ ಅನಾಥ ಗೊಂಬೆಯ ಆಚರಿಸುವರೆ? ಆಚರಣೆ,‌ಉಪಚಾರಿಕೆ, ಉಪ್ಪರಿಗೆ ಮೆಲೇರಿಕೆ. ಅವಹೇಳನ, ಕನವರಿಕೆ, ಮನದ ಮರುಗು ಭಾವನೆ ಹರಕು‌ ಹಾಸಿಗೆ, ಕಾಲು ಚಾಚಲೆ!?

----------------------------------

ನೋಂದಣಿ ಐಡಿ : KPF-S1-5267

0
Votes
101
Views
11 Months
Since posted

Finished since 296 days, 11 hours and 59 minutes.

Scroll to Top