Submission 691

ಶ್ಯಾಮನ ಒಲವು

ರಚನೆ : ಭಾಗ್ಯಶ್ರೀ ಶಂಕರ ಭಟ್

----------------------------------

ಮಧುರ ಮನಸಿನ ಒಲವ ಬಯಕೆಗೆ ಎಂದು ಬಿಡುಗಡೆಯೋ ರಾಧೆ ಎದೆಗೆ ಶ್ಯಾಮನೊಲವು ಎಂದು ತಲುಪುವುದೋ ಭಾವತೀರದ ಅಂಚಿನೆಡೆಗೆ ಪ್ರೀತಿ ನೌಕೆ ಸಾಗಿದೆ ಹೇಳಬೇಕು ಎಂಬ ಮುದವು ಕಣ್ಣಂಚಲಿ ಕರೆದಿದೆ ಶ್ಯಾಮನೆದೆಯ ಮೌನ ರಾಗ ಕೊಳಲ ನದವಾಗಿದೆ ರಾಧೇಗಾಗಿ ಮಿಡಿವ ಹೃದಯ ಸ್ವರದ ಸಾಲಿನಂತಿದೆ ಪ್ರೇಮದೊಲುಮೆಯ ಮಳೆಯ ಸುರಿಸಿ ಭುವಿಯ ಆಳಕು ತಲುಪಿದೆ ಗಗನದೆಡೆಗೆ ತಲುಪಬಯಸಿ ಚಿಲುಮೆಯಾಗಿ ಹೊಮ್ಮಿದೆ

----------------------------------

ನೋಂದಣಿ ಐಡಿ : KPF-S1-5298

0
Votes
141
Views
1 Year
Since posted

Finished since 352 days, 13 hours and 41 minutes.

Scroll to Top