Submission 707

ನನ್ನವಳು

ರಚನೆ : ವಾಣಿ ರಾವ್ ಕಿನ್ನಿಗೋಳಿ

----------------------------------

ಬಣ್ಣದುಡುಗೆಯ ಧರಿಸಿ ಬೆಡಗುಬಿನ್ನಾಣದಿ ಬಳುಕುತ ಹೊರಟಿಹಳು ಮದನಾರಿ ಬಣ್ಣಿಸಳಿವಳನು ಶಬ್ದಗಳೇ ಸಿಗುತಿಲ್ಲ ಭೂರಮೆಗಿಳಿದು ಬಂದ ಕಿನ್ನರಿ ಎಳೆಎಳೆಯಾಗಿಹ ಕೇಶರಾಶಿಯನು ಒಂದೆಡೆ ಸೇರಿಸಿ ಕುಳ್ಳಿರಿಸಿಹಳು ಕೇಶಾಲಂಕಾರದೊಡನೆ ಸುಮವನು ಮುಡಿದು ಸುಮತಿಯು ಸಿಂಗಾರಗೊಂಡಿಹಳು ಚಿತ್ತಾರದ ದುಪ್ಪಟ ದಿರಿಸಿನೊಡಗೂಡಿ ಚಿತ್ತ ಸೆಳೆಯುವ ರಂಗವಲ್ಲಿಯಂತಿಹುದು ಕೈ ಮುಷ್ಠಿಯಲಿ ಬಿಗಿಯಾಗಿರೋ ಕೋಲ್ಗಳು ದೇವಕನ್ನಿಕೆಯ ಜಾದೂಕೋಲಿನಂತಿಹುದು ಯಾರಿವಳು ನಾ ಕಾಣೆ ನಾಟ್ಯರಾಣಿಯೋ ಕವಿಯ ಕಲ್ಪಿತ ಕಾವ್ಯಕನ್ನಿಕೆಯೋ ಸಂಸ್ಕೃತಿಯ ಬಿಂಬಿಸುವ ದರ್ಪಣಾಂಗಿಯೋ

----------------------------------

ನೋಂದಣಿ ಐಡಿ : KPF-S1-5307

0
Votes
160
Views
1 Year
Since posted

Finished since 384 days, 1 hours and 24 minutes.

Scroll to Top