Submission 888

ಬೇಸಿಗೆಕಾಲ

ರಚನೆ : ವಿಜಯಕುಮಾರ್

----------------------------------

ಬಂದಿದೆ ಬಂದಿದೆ ಬೇಸಿಗೆಕಾಲ ರಾತ್ರಿ ಹೊತ್ತು ಮನೆಯಲ್ಲಿರೋಕೆ ಇಲ್ಲ ಉಳಿಗಾಲ ಮಲಗಲು ಹೋದರೆ ತುಂಬಾ ಸೆಕೆ ಮನೆತುಂಬೆಲ್ಲ ಸೊಳ್ಳೆಗಳ ಕೇಕೆ ಬೆಳಗ್ಗೆಯಿಂದಲೇ ಬಿಸಿಲಿನ ಕಾಟ ಮಧ್ಯಾಹ್ನ ಆದರೆ ಹೇಳುತ್ತೆ ಬಿಸಿಲಿನ ಪಾಠ ಹೊರಗಡೆ ಹೋಗಲು ಆಗುತ್ತೆ ತುಂಬಾ ಭಯ ಆಗಂತೇಳಿ ಮನೇಲಿದ್ರೆ ಹೋಗುತ್ತಿಲ್ಲ ಬೇಗ ಸಮಯ ಮೋಡಗಳ ತುಂಬೆಲ್ಲ ಸೂರ್ಯನ ಛಾಯೆ ಧರೆಯ ಮೇಲೆ ಇರುವ ನೆರಳೆಲ್ಲ ಮಾಯೆ ಏರುತ್ತಿದೆ ಏರುತ್ತಿದೆ ದರಿಯ ಮೇಲೆ ಬಿಸಿಲಿನ ತಾಪ ಇದರಿಂದ ಜನರಲ್ಲಿ ಮೂಡುತ್ತಿದೆ ವಿಪರೀತ ಕೋಪ ಬಿಸಿಲಿನ ತಾಪಕ್ಕೆ ಜನರು ಹೋಗುತ್ತಿದ್ದಾರೆ ನೆರಳಿನ ಮೊರೆ ತಂಪು ಪಾನೀಯಗಳಿಗೆ ಜನರು ಆಗುತ್ತಿದ್ದಾರೆ ಸೆರೆ ಇನ್ನಾದರೂ ಬಿಸಿಲಿನ ತಾಪ ತಗ್ಗಿಸಿ ಎಂದು ನಾನು ನಡುವೆ ದೇವರಲ್ಲಿ ಮೊರೆ

----------------------------------

ನೋಂದಣಿ ಐಡಿ : KPF-S1-5410

0
Votes
198
Views
1 Year
Since posted

Finished since 404 days, 19 hours and 37 minutes.

Scroll to Top