ನೀ ಅವತರಿಸು
ರಚನೆ : ಮೌನಕ್ರಾಂತಿ
----------------------------------
ಬೆದರಿ ನಿಂತಿಹಳು ಭಾರತ ಮಾತೆ ಕಂಡು ತನ್ನಯ ಮಗಳ ವ್ಯಥೆ ಬೆತ್ತಲೆ ಮೆರವಣಿಗೆ, ಬತ್ತದ ದ್ವೇಷ ಸ್ವಾತಂತ್ರ್ಯದ ದಿನವಷ್ಟೇ ಜಯ ಜಯಘೋಷ, ಧರ್ಮದ ನೆಲೆಯಲಿ ಅಧರ್ಮದ ತಾಂಡವ ಭೂಮಿಯ ಮೇಲೆಯೇ ನರಕದ ಅನುಭವ ಓ ಪ್ರಳಯರುದ್ರನೇ ನೀ ಅವತರಿಸು, ನೀಚ ರಕ್ಕಸರನು ಬಾ ಸಂಹರಿಸು, ನವಗುಲಾಮಗಿರಿಯಿಂದೆಮ್ಮನು ಉಳಿಸು.
----------------------------------
ನೋಂದಣಿ ಐಡಿ : KPF-S1-5472